ಒಡಿ ಬಡಿ ಮಧ್ಯೆ ಹೊಸಬರ ಅಪ್ಪಟ ಕನ್ನಡದ ಕಾದಲ್ ಗೆ ಅದ್ದೂರಿ ಮುಹೂರ್ತ
Posted date: 03 Sun, Mar 2024 09:06:52 AM
ವಿಜಯದೀಪ ಪಿಕ್ಚರ್ಸ್ ಅಡಿಯಲ್ಲಿ ವಿಜಯಪ್ರಿಯ ಅವರ ಕಥೆ ಚಿತ್ರಕಥೆ ನಿರ್ದೇಶನದಲ್ಲಿ‌ ತಯಾರಾಗ್ತಿರುವ ಕಾದಲ್  ಚಿತ್ರದ ಮುಹೂರ್ತ ಮಾಗಡಿ ರಸ್ತೆಯ ನಾಡಪ್ರಭು ಕೆಂಪೇಗೌಡ ಲೇಔಟ್ ನಲ್ಲಿರುವ ಶ್ರೀ ಆದಿಶಕ್ತಿ ಮದನಘಟ್ಟಮ್ಮ ದೇವಸ್ಥಾನದಲ್ಲಿ ನೆರವೇರಿತು. ಚಿತ್ರತಂಡ ಸಮಾರಂಭದಲ್ಲಿ ಭಾಗಿಯಾಗಿ ಕಾದಲ್ ಬಗ್ಗೆ  ಮಾಧ್ಯಮದವರಿಗೆ ಮಾಹಿತಿ ನೀಡಿದರು. ವಿಶೇಷ ಅಂತಂದ್ರೆ ಭಾವನೆಗಳ ಭಾಷೆಗೆ ಮೌನವೆಂಬ ಲಿಪಿಯೇ ಪ್ರೇಮಿ  ಅನ್ನೋ ಟ್ಯಾಗ್ ಲೈನ್ ಗಮನ ಸೆಳೆಯುತ್ತಿದೆ. ಕಾದಲ್ ಗೆ ನಿರ್ದೇಶಕರ ಧರ್ಮಪತ್ನಿ ದೀಪಿಕಾ ಬಂಡವಾಳ ಹೂಡಿದ್ದಾರೆ.
 
ಕಾದಲ್, ಮೂರ್ನಾಲ್ಕು ವರ್ಷದಿಂದ ಈ ಸ್ಕ್ರಿಪ್ಟ್ ವರ್ಕ್ ಮಾಡ್ತಾ ಬಂದಿದ್ದೀವಿ. ಕಾದಲ್ ಒಂದೊಳ್ಳೆ ಪರಿಶುದ್ಧವಾದ ಪ್ರೇಮ ಕಥೆ. ಗನ್ನು, ಮಚ್ಚು, ಲಾಂಗು, ಈ ಬೇಸ್ ಇಟ್ಕೊಂಡು ಇತ್ತೀಚೆಗೆ ಹೆಚ್ಚೆಚ್ಚು ಸಿನಿಮಾಗಳು ತೆರೆಗೆ ಬರ್ತಿವೆ. ಈ ಟೈಮ್ನಲ್ಲಿ ಈ ತರಹದ ಲವ್ ಸ್ಟೋರಿ ಯಾಕೆ ಕೊಡ್ಬಾರ್ದು ಅಂತ ಈ ಚಿತ್ರವನ್ನ ಕೈಗೆತ್ತುಕೊಂಡಿದ್ದೇನೆ. ಮ್ಯೂಸಿಕ್ ಮತ್ತು ಕಥೆಯಲ್ಲಿ‌ ಚಿತ್ರ ಅದ್ಭುತವಾಗಿ ಮೂಡಿ ಬರತ್ತೆ. ಕಾದಲ್ ಅಂದೊಡನೆ ತಮಿಳು ಸಿನ್ಮಾನ ಅನ್ನೋ ಪ್ರಶ್ನೆ ಮೂಡತ್ತೆ, ಆದ್ರೆ ಕಾದಲ್ ಅನ್ನೋದು ಅಪ್ಪಟ ಕನ್ನಡ ಪದ. ಹಾಸನ್, ಮಂಡ್ಯ, ಬೆಂಗಳೂರಿನಲ್ಲಿ ಶೂಟಿಂಗ್ ಪ್ಲ್ಯಾನ್ ಮಾಡಿದ್ದೀವಿ..ಒಟ್ಟಾರೆ ಸಿನ್ಮಾದಲ್ಲಿ 6 ಸಾಂಗ್ಸ್ ಇರಲಿದೆ ಎಂದು ನಿರ್ದೇಶಕ ವಿಜಯಪ್ರಿಯ ತಿಳಿಸಿದರು.

ಕಾದಲ್ ಚಿತ್ರದ ನಾಯಕ‌ ನಟ ಸುಗ್ರೀವ್ ಮಾತನಾಡಿ, ನೀನಾಸಂ ನಲ್ಲಿ ಡಿಪ್ಲೊಮಾ ಇನ್ ಥಿಯೇಟರ್ ಆರ್ಟ್ಸ್ ಮಾಡಿದ್ದೀನಿ.. ನಾಟಕ ನನ್ನ ಫೌಂಡೇಶನ್.. ಸೀರಿಯಲ್ ನಲ್ಲೂ ಈ ಮುಂಚೆ ಆ್ಯಕ್ಟ್ ಮಾಡಿದ್ದೀನಿ. ಈ ಮೂವಿ ಸ್ಟಾರ್ಟ್ ಆಗೋ ಮುಂಚೆ ಇದೇ ಟೀಮ್ ಜೊತೆ ಒಂದು ಶಾರ್ಟ್ ಮೂವಿ ಮಾಡಿದ್ವಿ. ಅದು ಎಡಿಟಿಂಗ್ ಆಗುವ ಮೊದಲೇ, ಒಂದು ಸಿನಿಮಾ ಮಾಡ್ತಿದ್ದೀವಿ ಇದನ್ನ ನೀವೇ ಮಾಡ್ಬೇಕು ಅಂದ್ರು ಡೈರೆಕ್ಟರ್. ತುಂಬಾ ಖುಷಿಯಾದ ವಿಷಯ ಇದು ನನಗೆ.. ಇಲ್ಲಿ ಯಾರು ಹೊಸಬರಲ್ಲ ಅವರವರ ಫಿಲ್ಡ್ ನಲ್ಲಿ ಎಲ್ಲರೂ ಎಕ್ಸ್ ಪರ್ಟ್ಸ್. ಇದು ನನ್ನ ಎರಡನೇ ಸಿನಿಮಾ, ಲವರ್ ಬಾಯ್ ಆಗಿ ಕಾಣಿಕಿಸಿಕೊಳ್ತಾ ಇದ್ದೀನಿ ಎಂದು ನಟ ಸುಗ್ರೀವ್ ತಿಳಿಸಿದ್ದಾರೆ.

ನಾಯಕಿ ಗೀತಾ ಮಾತನಾಡಿ ಸಿನಿಮಾದ ಟೈಟಲ್ ಕೇಳಿ ತಮಿಳು ಸಿನ್ಮಾ ಅಂದುಕೊಂಡೆ. ಡೈರೆಕ್ಟರ್ ಹೇಳಿದ್ರು ಕಾದಲ್ ತಮಿಳು ಅಲ್ಲ ಅಪ್ಪಟ ಕನ್ನಡ ಪದ ಅಂತ. ಪ್ರೀತಿ ಇಲ್ಲದೆ ಜಗತ್ತಿಲ್ಲ. ಇಂತಹ ಸಿನ್ಮಾದಲ್ಲಿ ನಾನು ಪಾತ್ರ ಮಾಡ್ತಾ‌ ಇದ್ದೀನಿ ಅನ್ನೋದೆ ಖುಷಿ. ಸಿನ್ಮಾದಲ್ಲಿ‌ ಪಿಎಚ್ ಡಿ ಹುಡುಗಿ ಕ್ಯಾರೆಕ್ಟರ್ ಮಾಡ್ತಿದ್ದೀನಿ ಅಂದ್ರು ನಾಯಕಿ ಗೀತಾ.

ಛಾಯಾಗ್ರಹಣ ಸಂಜಯ್ ಎಲ್ ಚನ್ನಪ್ಪ, ಸಂಗೀತ ನಿರ್ದೇಶಕ ಹಿತನ್ ಹಾಸನ್, ವಿ. ಗೋಪಿನಾಥ್ ಸಂಭಾಷಣೆ ಚಿತ್ರಕ್ಕಿದೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed